

ಕಂಪ್ಲಿ: ತಾಲೂಕಿನಾದ್ಯಂತ ಎರಡು ದಿನ ಸುರಿದ ಮಳೆಯಿಂದಾಗಿ ಐದು ಕಚ್ಚಾಮನೆಗಳು ಭಾಗಶಃ ಕುಸಿದಿವೆ. ಬುಧವಾರ ರಾತ್ರಿ 40 ಮಿಮೀ, ಗುರುವಾರ 0.4 ಮಿಮೀ ಮಳೆ ಸುರಿದಿದೆ. ಆರ್ದ್ರತೆಗೆ ಕೆಲವು ಮನೆಗಳು ಭಾಗಶಃ ಕುಸಿದಿವೆ. ತಾಲೂಕಿನ ಸಣಾಪುರದಲ್ಲಿ 2, ಎಮ್ಮಿಗನೂರು 2, ಚಿಕ್ಕಜಾಯಿಗನೂರಿನಲ್ಲಿ ಒಂದು ಕಚ್ಚಾಮನೆಯ ಛಾವಣಿ ಭಾಗಶಃ ಕುಸಿದಿವೆ. ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳ ತಂಡ ಭೇಟಿ ನೀಡಿ ಕುಸಿದ ಮನೆಗಳನ್ನು ಪರಿಶೀಲಿಸಿದ ಬಳಿಕ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ತಿಳಿಸಿದ್ದಾರೆ.