ಬೆಂಕಿಗೆ ಗೃಹೋಪಯೋಗಿ ವಸ್ತಗಳು ಭಸ್ಮ

Published on

ಮೈಸೂರು: ಅಗ್ರಹಾರದ ಮಧುವನ ಬಡಾವಣೆಯ ಗುರು ಅವರ ಮನೆಯಲ್ಲಿ ಶನಿವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಬಿದ್ದು ಮನೆಯ ವಸ್ತುಗಳು ಸುಟ್ಟು ಹೋಗಿವೆ.

ಮಾಜಿ ಯೋಧ ಗುರು ಕೋಣೆಯಲ್ಲಿ ಬೀಡಿ ಸೇದಿದ್ದು, ಹಾಸಿಗೆಯ ಮೇಲೆ ಹಾಗೇ ಬಿಟ್ಟು ಹೊರ ಬಂದಿದ್ದಾರೆ ಎನ್ನಲಾಗಿದೆ. ಕೆಲ ಹೊತ್ತಿಗೆ ಬೆಂಕಿ ಹೊತ್ತಿಕೊಂಡು ಕೋಣೆಯಲ್ಲಿನ ಹಾಸಿಗೆ ಸೇರಿದಂತೆ ಎಲ್ಲ ವಸ್ತುಗಳಿಗೆ ವ್ಯಾಪಿಸಿದೆ. ಅಗ್ನಿಶಾಮಕ ಸಿಬ್ಬಂದಿ, ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸುವ ಮೂಲಕ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net