ಮನೆ ಕಿಟಕಿ ಮುರಿದು ಕಳ್ಳತನ

Published on

ಶಿರಾ: ಪಟ್ಟಣದ ಜ್ಯೋತಿ ನಗರದ ಬೆನಕ ಟ್ರೇಡರ್ಸ್​ ಹಿಂಭಾಗದ ಮನೆಯೊಂದರಲ್ಲಿ ಮಂಗಳವಾರ ದರೋಡೆಕೊರರು ಮನೆಯ ಕಿಟಕಿ ಮುರಿದು ಕಳ್ಳತನ ಮಾಡಿದ್ದಾರೆ. ಪಟ್ಟನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಸ್​.ಜಿ.ಮಂಜುಳಾ ಎಂಬುವವರು ಮನೆ ಬೀಗ ಹಾಕಿಕೊಂಡು ಹೋಗಿದ್ದ ವೇಳೆ ಕಳ್ಳರು ಕಿಟಕಿ ಮುರಿದು ಚಿನ್ನಾಭರಣ ಮತ್ತು ಹಣ ದೋಚಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಪುರುಷೋತ್ತಮ್​, ವೃತ ನಿರೀಕ್ಷಕ ಪ್ರವಿಣ್​ ಕುಮಾರ್​, ಬೆರಳಚ್ಚು ತಜ್ಞರು, ಶ್ವಾನ ತಪಾಸಣಾ ದಳ ಭೇಟಿ ನೀಡಿ ತಪಾಸಣೆ ನಡೆಸಿದರು. ಶಿರಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net