ಪ್ರತಿ ಮನೆಗೆ ನೀರು ಪೂರೈಕೆ

12SND-05
Published on

ಸಿಂಧನೂರು: ಜೆಜೆಎಂ ಯೋಜನೆಯಡಿ ಪ್ರತಿ ಮನೆಗೆ ನೀರು ಪೂರೈಕೆ ಮಾಡಲಾಗುವುದು ಎಂದು ಪಿಡಿಒ ಸಿದ್ದಪ್ಪ ಹೇಳಿದರು.

ತಿಡಿಗೋಳ ಗ್ರಾಪಂ ವ್ಯಾಪ್ತಿಯ ಕುರುಕುಂದ ಗ್ರಾಮದಲ್ಲಿ ಜಿಪಂ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಆಯೋಜಿಸಿದ್ದ ಹರ್ ಘರ್ ಜಲೋತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಗ್ರಾಪಂನಿಂದ ಪೂರೈಸಲಾಗುವ ನೀರನ್ನು ಮಿತವಾಗಿ ಬಳಕೆ ಮಾಡಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕೆಂದರು.

ನೀರು ನೈರ್ಮಲ್ಯ ಸಮಿತಿ ಅಧ್ಯಕ್ಷ ಶಿವಬಸನಗೌಡ ಮಾತನಾಡಿ, ಜೆಜೆಎಂ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಇಂಜಿನಿಯರ್ ಮಹ್ಮದ್ ಅಜರುದ್ದೀನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಪ್ರಮುಖರಾದ ದುರ್ಗಪ್ಪ ಶೇಷಗಿರಿ, ಅಮರೇಗೌಡ ಹೊಸಮನಿ, ಕರೇಗೌಡ ಪೊಲೀಸ್ ಪಾಟೀಲ್, ವೀರೇಶ ನಾಯಕ್, ಗುಡದಪ್ಪ, ಚಂದ್ರಪ್ಪ ಚನ್ನಳ್ಳಿ, ಅಂಗನವಾಡಿ ಕಾರ್ಯಕರ್ತೆ ಉಮಾದೇವಿ, ಆಶಾ ಕಾರ್ಯಕರ್ತೆಶಿವಮ್ಮ, ಐಎಸ್‌ಆರ್‌ಎ ತಂಡದ ಶಾಂತಾ ಮುತ್ತಯ್ಯ ಗುರುವಿನ, ಹನುಮಂತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net