

ಬಂಟ್ವಾಳ: ತಾಲೂಕು ವ್ಯಾಪ್ತಿಯಲ್ಲಿ ಮಳೆಯ ಅವಾಂತರ ಮುಂದುವರಿದಿದೆ. ಸಿದ್ದಕಟ್ಟೆ ಕರ್ಪೆ ಲೋಕೋಪಯೋಗಿ ರಸ್ತೆಯ ಪಕ್ಕದ ಗುಡ್ಡ ಜರಿದು ಹತ್ತಿರದ ಸತೀಶ್ ಆಳ್ವರ ಮನೆ ಆವರಣಗೋಡೆ ಕುಸಿದು ಬಿದ್ದಿದೆ.
ಬಾಳ್ತಿಲ ಗ್ರಾಮದ ಯಶೋದಾರವರ ಮನೆಯ ಹಿಂಭಾಗದ ಗುಡ್ಡ ಕುಸಿದು ಮನೆಯ ಹಿಂಭಾಗದಲ್ಲಿ ರಾಶಿ ಬಿದ್ದಿದೆ. ಮೇರಮಜಲು ಗ್ರಾಮದ ತೇವುಕಾಡು ನಿವಾಸಿ ರೇವತಿ ಜನಾರ್ದನ ಪೂಜಾರಿಯವರ ಮನೆಯ ಆವರಣಗೋಡೆ ಕುಸಿದು ಬಿದ್ದು ಮನೆ ಅಪಾಯಕ್ಕೆ ಸಿಲುಕಿದೆ. ಕಡೇಶ್ವಾಲ್ಯ ಗ್ರಾಮದ ಪಾರ್ವತಿ ರಾಮಣ್ಣ ಪೂಜಾರಿಯವರ ಮನೆ ಕುಸಿದು ಬಿದ್ದಿದೆ. ಪಾಣೆಮಂಗಳೂರು ಗ್ರಾಮದ ತೆಕ್ಕಿಗುಡ್ಡೆ ಎಂಬಲ್ಲಿ ಮೋಕ್ಷಿತಾರವರ ಮನೆಯ ಗೋಡೆ ಕುಸಿದು ಹೆಂಚುಗಳು ಉದುರಿವೆ.