ಗಾಳಿ-ಮಳೆಗೆ ಕುಸಿದ ಮನೆ ಗೋಡೆ

rain
ಜೇನುಗದ್ದೆ ಗ್ರಾಮದ ರಾಧಾ ಎಂಬುವರ ಮನೆಯ ಹಿಂಭಾಗದ ಗೋಡೆ ಕುಸಿದಿರುವುದನ್ನು ಖಾಂಡ್ಯ ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರು ವೀಕ್ಷಿಸಿದರು.
Published on

ಬಾಳೆಹೊನ್ನೂರು: ಗಾಳಿ-ಮಳೆಯಿಂದ ಸಾರಗೋಡು ಬಳಿ ಮಂಗಳವಾರ ಮುಖ್ಯ ರಸ್ತೆಗೆ ಮರ ಬಿದ್ದು ವಾಹನ ಸಂಚಾರ ವ್ಯತ್ಯಯವಾಗಿತ್ತು.

ಬಾಳೆಹೊನ್ನೂರು-ಮೂಡಿಗೆರೆ ರಸ್ತೆಯ ಸಂಪರ್ಕ ಕಡಿತಗೊಂಡಿತ್ತು. ಸ್ಥಳಕ್ಕೆ ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ಥರು ತೆರಳಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಮೀಪದ ಜೇನುಗದ್ದೆ ಗ್ರಾಮದ ರಾಧಾ ಎಂಬುವರ ಮನೆಯ ಹಿಂಭಾಗದ ಗೋಡೆ ಮಂಗಳವಾರ ಕುಸಿದು ಮನೆಗೆ ಸ್ವಲ್ಪ ಹಾನಿಯಾಗಿದೆ. ಸ್ಥಳಕ್ಕೆ ದೇವದಾನ ಗ್ರಾಪಂ ಅಧ್ಯಕ್ಷೆ ಶೀಲಾವತಿ, ಪಿಡಿಒ ದೇವರಾಜ್, ಕಂದಾಯ ನಿರೀಕ್ಷಕ ಪ್ರಕಾಶ್, ಶಿವಕುಮಾರ್, ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಚಂದ್ರಶೇಖರ್ ರೈ, ಪಿ.ಸುರೇಶ್, ಹನ್ೀ, ಅವಿನಾಶ್ ಟೆಲ್ಲಿಸ್, ಕುಮಾರ್, ರಾಕೇಶ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net