

ಮಹಾಲಿಂಗಪುರ: ಕಳೆದ ಎರಡ್ಮೂರು ದಿನಗಳಿಂದ ಸುರಿದ ಮಳೆಗೆ ಪಟ್ಟಣದ ಗಡಾದ ಓಣಿ ನಿವಾಸಿ ಸಿದಗಿರೆಪ್ಪ ಕಾಗಿ ಅವರ ಮನೆ ಗೋಡೆ ಕುಸಿದು ಬಿದ್ದಿದೆ.
ಮಂಗಳವಾರ ರಾತ್ರಿ ಅಂದಾಜು 10-30 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಅವಘಡ ಸಂಭವಿಸುವುದಕ್ಕೂ ಮುನ್ನ ಮನೆಯವರು ಅದೇ ಕೋಣೆಯಲ್ಲಿ ಕುಳಿತು ಊಟ ಮಾಡಿದ್ದರು. ಬಳಿಕ ಬೇರೆ ಕೋಣೆಗೆ ತೆರಳಿದ ಬಳಿಕ ಗೋಡೆ ಕುಸಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಸತೀಶ ಕಮಲದಿನ್ನಿ, ನೇಕಾರ ಮುಖಂಡ ಜಿ.ಎಸ್. ಗೊಂಬಿ ಆಗಮಿಸಿ ಪರಿಶೀಲಿಸಿದ್ದಾರೆ. ಸತೀಶ ಕಮಲದಿನ್ನಿ ಮಾತನಾಡಿ, ಮೇಲಧಿಕಾರಿಗಳಿಗೆ ಈ ಕುರಿತು ವರದಿ ಸಲ್ಲಿಸಲಾಗುವುದೆಂದು ತಿಳಿಸಿದರು. ನೇಕಾರ ಧುರೀಣ ಜಿ.ಎಸ್. ಗೊಂಬಿ ಮಾತನಾಡಿ, ಕೂಡಲೇ ಹಾನಿಯಾದ ನೇಕಾರನಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.