ನಿರಂತರ ಮಳೆಗೆ ಕುಸಿದ ಮನೆ ಗೋಡೆ

ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಮನೆ ಕುಸಿದಿರುವುದನ್ನು ಗ್ರಾಪಂ ಸದಸ್ಯ  ಸುರೇಶ್, ಪಿಡಿಒ ಮಹೇಂದ್ರ ಸ್ವಾಮಿ,  ಕಾರ್ಯದರ್ಶಿ ಕೃಷ್ಣಪ್ಪ  ಪರಿಶೀಲಿಸಿದರು
ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಮನೆ ಕುಸಿದಿರುವುದನ್ನು ಗ್ರಾಪಂ ಸದಸ್ಯ ಸುರೇಶ್, ಪಿಡಿಒ ಮಹೇಂದ್ರ ಸ್ವಾಮಿ, ಕಾರ್ಯದರ್ಶಿ ಕೃಷ್ಣಪ್ಪ ಪರಿಶೀಲಿಸಿದರು
Published on

ಮದ್ದೂರು: ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ತಾಲೂಕಿನ ಆಬಲವಾಡಿಯಲ್ಲಿ 3 ಮನೆಗಳು ಸೋಮವಾರ ರಾತ್ರಿ ಕುಸಿದಿವೆ.

ಗ್ರಾಮದ ವಿಶಾಲಮ್ಮ ಅವರ ಹಂಚಿನ ಮನೆ ಸಂಪೂರ್ಣ ಕುಸಿದಿದ್ದು, ಅದೃಷವಶಾತ್ ಮನೆಯಲ್ಲಿ ಯಾರು ಇಲ್ಲದ ಪರಿಣಾಮ ಯಾವುದೇ ಸಾವು-ನೋವು ಸಂಭವಿಸಿಲ್ಲ. ಗ್ರಾಮದ ಕೆ.ಸಿ.ಪುಟ್ಟಸ್ವಾಮಿ, ತಿಮ್ಮೇಶ ಅವರ ಹೆಂಚಿನ ಮನೆಗಳ ಗೋಡೆಗಳು ಕುಸಿದಿದ್ದು, ದವಸ ಧಾನ್ಯ, ಗೃಹೋಪಯೋಗಿ ವಸ್ತುಗಳು ಹಾಳಾಗಿವೆ.

ವಿಷಯ ತಿಳಿದ ತಕ್ಷಣ ಗ್ರಾಮ ಪಂಚಾಯಿತಿ ಸದಸ್ಯ ಆಬಲವಾಡಿ ಸುರೇಶ್, ಪಿಡಿಒ ಮಹೇಂದ್ರ ಸ್ವಾಮಿ, ಕಾರ್ಯದರ್ಶಿ ಕೃಷ್ಣಪ್ಪ ಸ್ಥಳಕ್ಕೆ ಧಾವಿಸಿ ಮನೆಯವರಿಗೆ ಸಾಂತ್ವನ ಹೇಳುವ ಜತೆಗೆ, ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡುವ ಮೂಲಕ ಅನುಕೂಲ ಕಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net