ಮಳೆಗೆ ಮನೆ, ಕಾಂಪೌಂಡ್ ಕುಸಿತ

Koppa comp
ಕೆಸವೆ ಗ್ರಾಮದ ಚೌಕಿಯ ಮಲ್ಲಿಕಾ ಎಂಬುವವರ ಮನೆಯ ಮುಂಭಾಗ ಕಾಂಪೌಂಡ್ ಕುಸಿದಿರುವುದು.
Published on

ಕೊಪ್ಪ: ಕಳಸ ಮತ್ತು ಕೊಪ್ಪ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಂದ ಮಳೆ ಬಿರುಸುಗೊಂಡಿದೆ.

ಕಳಸ ಗ್ರಾಪಂ ವ್ಯಾಪ್ತಿಯ ಹೊಸೂರಿನಲ್ಲಿ ಮಳೆಗೆ ಶಂಕರ ಎಂಬುವವರ ಮನೆ ಕುಸಿದಿದೆ. ಮನೆ ಬಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಮನೆ ಸಂಪೂರ್ಣ ಹಾನಿಗೊಳಗಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೆೇಟಿ ನೀಡಿ ಪರಿಶೀಲಿಸಿದರು. ಕೊಪ್ಪ ತಾಲೂಕಿನ ಕೆಸವೆ ಗ್ರಾಮದ ಚೌಕಿಯ ಮಲ್ಲಿಕಾ ಎಂಬುವವರ ಮನೆ ಮುಂಭಾಗದ ಕಾಂಪೌಂಡ್ ಕುಸಿದಿದೆ. ಮೇಗುಂದ ಹೋಬಳಿ ಗುಡ್ಡೆತೋಟ ಗ್ರಾಮದ ಹೂವಿನಗುಂಡಿ ಸುಶೀಲಾ ಎಂಬುವವರ ಕೊಟ್ಟಿಗೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕೊಪ್ಪ, ಹರಿಹರಪುರ, ಜಯಪುರ, ಕಮ್ಮರಡಿ, ಬಸರೀಕಟ್ಟೆ ಪ್ರದೇಶಗಳಲ್ಲಿ ವರ್ಷಧಾರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net