ಮನೆ ಬಾಗಿಲ ಕೀಲಿ ಮುರಿದು ಚಿನ್ನಾಭರಣ ಕಳ್ಳತನ

64cb6551-7b47-4343-95d4-1fe6a8304529
Published on

ಧಾರವಾಡ: ಯಾರೂ ಇಲ್ಲದ ಮನೆಗೆ ಕನ್ನ ಹಾಕಿದ ಕಳ್ಳರು ಬಾಗಿಲ ಕೀಲಿ ಮುರಿದು ಒಳಪ್ರವೇಶಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ನಗರದ ಕೆಂಪಗೇರಿಯಲ್ಲಿ ಶುಕ್ರವಾರ ನಡೆದಿದೆ. ಅರುಣ ಹುಣಗುಂದ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಹುನಗುಂದ ಕುಟುಂಬದವರು ಸಂಬAಽಕರ ಮದುವೆಗೆ ಯಾದಗಿರಿಗೆ ತೆರಳಿದ್ದರು. ಇದನ್ನರಿತ ಕಳ್ಳರು ಬಾಗಿಲ ಕೀಲಿ ಮುರಿದು ಒಳನುಗ್ಗಿ ಸುಮಾರು 250 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಹುನಗುಂದ ಕುಟುಂಬದವರು ಶನಿವಾರ ಮನೆಗೆ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net