

ಭಟ್ಕಳ: ಪಟ್ಟಣದ ನಾಗಪ್ಪ ನಾಯಕ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನುಗ್ಗಿದ ಕಳ್ಳರು ಮನೆಯಲ್ಲಿರುವ ಕಪಾಟುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿಸಿ ನಗದು ದೋಚಿ ಪರಾರಿಯಾಗಿದ್ದಾರೆ.
ಪಟ್ಟಣದ ನಾಗಪ್ಪ ನಾಯ್ಕ ರಸ್ತೆಯಲ್ಲಿರುವ ಬದ್ರುದ್ದುಜ ಬರ್ಮಾವರ್ ಅವರ ನಿವಾಸಕ್ಕೆ ಕನ್ನ ಹಾಕಿದ ಕಳ್ಳರು ನಗದು ದೋಚಿ ಪರಾರಿಯಾಗಿದ್ದಾರೆ. ಮನೆ ದೋಚುವ ಯತ್ನದಲ್ಲಿ ಬೆಲೆಬಾಳುವ ಬಾಗಿಲುಗಳು ಮತ್ತು ಕಪಾಟುಗಳಿಗೆ ಹಾನಿಯಾಗಿದ್ದು, ಕದ್ದ ನಗದಿನಿಂದ ಲಕ್ಷಗಟ್ಟಲೆ ನಷ್ಟವಾಗಿದೆ. ಶನಿವಾರ ರಾತ್ರಿ ಹೆರಿಗೆ ನಿಮಿತ್ತ ಮಗಳ ಮನೆಯಲ್ಲಿ ತೆರಳಿದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಾಹಿತಿ ಪಡೆದ ಪಟ್ಟಣ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಮುಂಬಾಗಿಲಿನಿಂದ ಒಳ ಪ್ರವೇಶಿಸಿದ ಕಳ್ಳರು ಮನೆಗೆ ನುಗ್ಗಿ ದೋಚಿದ್ದು, ಕದ್ದ ಹಣದೊಂದಿಗೆ ಹಿಂಬಾಗಿಲ ಮೂಲಕ ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೊಡ್ಡಪ್ಪನನ್ನು ಕೊಂದ ದುರುಳನಿಗೆ ಶಿಕ್ಷೆ ಪಕ್ಕಾ