ಇಬ್ಬರು ಮನೆಗಳ್ಳರ ಬಂಧನ, 36 ತೊಲ ಬಂಗಾರದ ಆಭರಣ ವಶಕ್ಕೆ

Arrest Kaidhi
Published on

ರಾಯಚೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ರಚಿಸಿದ್ದ ರಾಯಚೂರು ಮತ್ತು ಸಿಂಧನೂರು ಉಪ ವಿಭಾಗ ವ್ಯಾಪ್ತಿಯ ಅಧಿಕಾರಿಗಳನ್ನು ಒಳಗೊಂಡ ತಂಡ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ತನಿಖಾ ತಂಡ ಸಿಂಧನೂರಿನ ಇಂದಿರಾ ನಗರದ ಚುಂಗು ಅಲಿಯಾಸ್ ಗೌಸ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ರಹಿಮಾನ್ ಮತ್ತು ತಾನು ಕೂಡಿಕೊಂಡು ರಾಯಚೂರಿನ ನೇತಾಜಿ ನಗರ ಠಾಣೆ, ಪಶ್ಚಿಮ ಠಾಣೆ, ಸಿಂಧನೂರು, ಬಳಗಾನೂರು, ಮುದಗಲ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 14.40 ಲಕ್ಷ ರೂ. ಮೌಲ್ಯದ 36 ತೊಲ ಬಂಗಾರದ ಆಭರಣ ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net