ಮನೆಯಲ್ಲಿ ಸಂಗ್ರಹಿಸಿದ ನೀರನ್ನು ಆಗಾಗ ಬದಲಿಸಿ

Moranahalli Larva chacking
ಮೋರನಹಳ್ಳಿಯಲ್ಲಿ ಅಳವಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮನೆ ಮನೆ ಲಾರ್ವ ಸಮೀಕ್ಷೆ ಕಾರ್ಯಕ್ರಮ ನಡೆಯಿತು.
Published on

ಅಳವಂಡಿ: ಮನೆಯಲ್ಲಿ ಸಂಗ್ರಹಿಸಿದ ನೀರನ್ನು ಆಗಾಗ ಬದಲಿಸಿ. ಇಲ್ಲದಿದ್ದರೆ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಿ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತವೆ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ರವೀಂದ್ರ ಕಮ್ಮಾರ ತಿಳಿಸಿದರು.

ಸಮೀಪದ ಮೋರನಹಳ್ಳಿಯಲ್ಲಿ ಅಳವಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಮ್ಮಿಕೊಂಡಿದ್ದ ಮನೆ ಮನೆ ಲಾರ್ವ ಸಮೀಕ್ಷೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ನಿಂತ ನೀರಿನಲ್ಲಿ ಸೊಳ್ಳೆಗಳು ಸಂತನೋತ್ಪತ್ತಿ ಮಾಡುತ್ತವೆ. ಹೀಗಾಗಿ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಸೊಳ್ಳೆ ಕಚ್ಚುವಿಕೆಯಿಂದ ಮಲೇರಿಯಾ, ಡೆಂೆಯಂತಹ ಮಾರಕ ರೋಗ ಹರಡುತ್ತವೆ. ಇವುಗಳ ಲಕ್ಷಣ ಕಂಡ ಕೂಡಲೆ ಆಸ್ಪತ್ರೆಗೆ ತೆರಳಿ ರಕ್ತ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು. ಆಶಾ ಕಾರ್ಯಕರ್ತೆಯರಾದ ಗವಿಸಿದ್ದಮ್ಮ, ಅಂದಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net