ಮನೆ ಹಂಚಿಕೆ ತಾರತಮ್ಯ ಸರಿಪಡಿಸಲಿ

32
ಬೆಳಗಾವಿಯಲ್ಲಿ ಜಿಪಂ ಸಿಇಒ ಹರ್ಷಲ್ ಭೋಯರ್ ಅವರಿಗೆ ಮದಭಾಂವಿ ಗ್ರಾಪಂ ಸದಸ್ಯರು ಮನವಿ ಸಲ್ಲಿಸಿದರು. ಅಧ್ಯಕ್ಷ ಮಹಾದೇವ ಕೋರೆ, ಮಹೇಶ ಕೇಸ್ತೆ, ಸಿದ್ದಲಿಂಗ ಇಬ್ರಾಹಿಂಪುರ, ಗೋಪಾಳ ಅವಳೆ ಇತರರಿದ್ದರು.
Published on

ಬೆಳಗಾವಿ: ಮನೆ ಹಂಚಿಕೆಯಲ್ಲಿ ತಾರತಮ್ಯವಾಗಿದ್ದು ಕೂಡಲೇ ಸರಿಪಡಿಸಬೇಕು ಎಂದು ಮದಭಾಂವಿ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.

ಮದಭಾಂವಿ ಸೇರಿ 6 ಗ್ರಾಮ ಪಂಚಾಯಿತಿಗಳಿಗೆ 2022-23ನೇ ಸಾಲಿನಲ್ಲಿ ಯಾವುದೇ ಮನೆ ಹಂಚಿಕೆ ಆಗಿಲ್ಲ. ಸದರಿ ಗ್ರಾಮ ಪಂಚಾಯಿತಿಗಳಿಗೆ ಅನುಗುಣವಾಗಿ ಮನೆ ಹಂಚಿಕೆ ಮಾಡಬೇಕು. ಮನೆ ಹಂಚಿಕೆಯಲ್ಲಿ ತಾರತಮ್ಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮದಭಾಂವಿ ಗ್ರಾಪಂ ಅಧ್ಯಕ್ಷ ಮಹಾದೇವ ಕೋರೆ, ಗ್ರಾಪಂ ಉಪಾಧ್ಯಕ್ಷೆ ಸತ್ಯವ್ವ ನಿಲಜಗಿ, ಮಹೇಶ ಕೇಸ್ತೆ, ಸಿದ್ದಲಿಂಗ ಇಬ್ರಾಹಿಂಪುರ, ಗೋಪಾಳ ಅವಳೆ, ವಿಠ್ಠಲ ಐಹೊಳೆ, ಸಂತೋಷ ಕಲ್ಲೂತಿ, ಶೋಭಾ ಕಾಂಬಳೆ, ಇಂದ್ರವ್ವ ನಂದಿವಾಲೆ, ಪವಿತ್ರಾ ನೀವಲಗಿ, ಯಲ್ಲವ್ವ ಬೇಡಗ, ಸಿದ್ದು ಖೋತ, ಅಬಾ ಚವ್ಹಾಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net