ರಾಯಬಾಗ: ಮನೆ ಮಂಜೂರು ಮಾಡಲು ಒತ್ತಾಯ

03 Raibag 1 photo-Web
ಬಸ್ತವಾಡ ಗ್ರಾಮದ ಮನೆ ರಹಿತರಿಗೆ ಸರ್ಕಾರಿ ಮನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಸ್ಥಳೀಯರು ತಾಪಂ ಇಒಗೆ ಮನವಿ ಸಲ್ಲಿಸಿದರು. ಸುಬ್ಬವ್ವ ಹೆಗಡೆ, ರತ್ನವ್ವ ಹೆಗಡೆ, ಶಾಲವ್ವ ಹೆಗಡೆ, ದುಂಡಪ್ಪ ಹೆಗಡೆ ಇತರರಿದ್ದರು.
Published on

ರಾಯಬಾಗ: ತಾಲೂಕಿನ ಬಸ್ತವಾಡ ಗ್ರಾಮದ ಮನೆರಹಿತರಿಗೆ ಸರ್ಕಾರಿ ಮನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ನಿವಾಸಿಗಳು ತಾಪಂ ಇಒ ಪ್ರಕಾಶ ವಡ್ಡರ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗುಡಿಸಲು ಮುಕ್ತ ಗ್ರಾಮ ಮಾಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದರೂ, ನಿಜವಾದ ಬಡವರಿಗೆ ಯೋಜನೆ ಲಾಭ ಮುಟ್ಟುತ್ತಿಲ್ಲ. ಮನೆ ಇಲ್ಲದೆ ತಾಡಪತ್ರೆ ಕಟ್ಟಿಕೊಂಡು ಬದುಕು ನಡೆಸುವಂತಹ ಚಿಂತಾಜನಕ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಮನೆರಹಿತ ನಿವಾಸಿಗಳಿಗೆ ಮನೆ ಮಂಜೂರು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಸಮಸ್ಯೆ ಸಂಬಂಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿದರು. ಸುಬ್ಬವ್ವ ಹೆಗಡೆ, ರತ್ನವ್ವ ಹೆಗಡೆ, ಶಾಲವ್ವ ಹೆಗಡೆ, ದುಂಡಪ್ಪ ಹೆಗಡೆ, ಮಲ್ಲಪ್ಪ ಹೆಗಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net