ಮಳೆಗೆ ಮನೆ ಭಾಗಶಃ ಕುಸಿತ

IMG-20240817-WA0172
Published on

ಅರಸೀಕೆರೆ: ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಮುಜಾವರ್ ಮೊಹಲ್ಲಾ ಬಡಾವಣೆ ನಿವಾಸಿ ನಜೀರ್ ಅಹ್ಮದ್ ಎಂಬುವರ ಮನೆ ಭಾಗಶಃ ಕುಸಿದು ಬಿದ್ದಿದೆ. ಮನೆಯ ಹೆಂಚುಗಳ ಬೀಳುವ ಸದ್ದಿಗೆ ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದರಿಂದ ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಮನೆಯಲ್ಲಿದ್ದ ಬಟ್ಟೆ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳು ಸಂಪೂರ್ಣ ಮಣ್ಣುಪಾಲಾಗಿವೆ. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ಕಂದಾಯ ಅಧಿಕಾರಿ ಶಿವಾನಂದ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರದ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net