₹10.52 ಲಕ್ಷ ಮೌಲ್ಯದ ನಗ-ನಾಣ್ಯ ಕಳ್ಳತನ

crime harapanahalli
Published on

ಹರಪನಹಳ್ಳಿ: ಪಟ್ಟಣದ ಗೌಳೇರ ಬೀದಿಯ ಮನೆಯಲ್ಲಿ ಕಳ್ಳರು 3.30 ಲಕ್ಷ ರೂ. ಹಾಗೂ ಬಂಗಾರದ ಆಭರಣಗಳು ಸೇರಿದಂತೆ ಒಟ್ಟು 10.52 ಲಕ್ಷ ಮೌಲ್ಯದ ವಸ್ತುಗಳನ್ನು ಶನಿವಾರ ತಡರಾತ್ರಿ ಕಳ್ಳತನ ಮಾಡಿದ್ದಾರೆ.

ಗೌಳಿ ರಾಜೇಂದ್ರ ಮನೆಗೆ ಬೀಗ ಹಾಕಿ ಮಹಡಿ ಮೇಲೆ ಮಲಗಿದ್ದಾರೆ. ಬೆಳಗ್ಗೆ ಎದ್ದು ಬಂದಾಗ ಮನೆಯ ಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. 80.9 ತೊಲ ಬಂಗಾರದ ಆಭರಣಗಳು, 10 ತೊಲ ಬೆಳ್ಳಿ ಆಭರಣಗಳು, 3.30 ಲಕ್ಷ ರೂ. ಕಳ್ಳತನವಾಗಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net