ಹಾಡಹಗಲೇ ಚಿಲಕ ಕಿತ್ತಿ ಮನೆಗಳ್ಳತನ

23-06.MDL.01
Published on

ಮುದಗಲ್: ಪಟ್ಟಣದಲ್ಲಿ ಶನಿವಾರ ಹಾಡಹಗಲು ಮನೆಯ ಚಿಲಕ ಕಿತ್ತಿ ಕಳ್ಳರು ಒಂಬತ್ತು ತೊಲ ಬಂಗಾರ ಕದ್ದೊಯ್ದಿದ್ದಾರೆ.
ಹಳೆಪೇಟೆಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ಪಕ್ಕದಲ್ಲಿನ ಕಿರಣಕುಮಾರ ದೊಡ್ಡಬಸಪ್ಪ ವಂದಾಲಿ ಮನೆಯಿಂದ ಬೆಳಗ್ಗೆ ಹೊರಹೋಗಿದ್ದಾಗ ಕಳ್ಳರು ಕೃತ್ಯ ಎಸಗಿದ್ದಾರೆ. ಕಿರಣಕುಮಾರ ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಬೀಗದ ಚಿಲಕವನ್ನು ಸ್ಕ್ರೂ ಸಮೇತ ಕಿತ್ತಿ ಕಳ್ಳತನ ಎಸಗಿರುವುದು ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net