ಕೆಲಸದಾಕೆಯ ಕರಾಮತ್ತು: 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

police
Published on

ಬೆಂಗಳೂರು: ಮನೆಗೆಲಸ ಮಾಡುವ ಮಹಿಳೆಯೊಬ್ಬಳು ತಾನು ಕೆಲಸ ಮಾಡುತ್ತಿದ್ದ ಎರಡು ಮನೆಗಳಲ್ಲಿ ಭಾರೀ ಮೊತ್ತದ ಚಿನ್ನಾಭರಣಗಳನ್ನು ಕದ್ದಿರುವ ಘಟನೆ ನಗರದ ಯಶವಂತಪುರದಿಂದ ವರದಿಯಾಗಿದೆ. ಮಾಲೀಕರ ದೂರಿನ ಮೇಲೆ ವಿಚಾರಣೆ ನಡೆಸಿರುವ ಆರ್.ಎಂ.ಸಿ.ಯಾರ್ಡ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಯಶವಂತಪುರದ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್‌ಮೆಂಟಿನಲ್ಲಿ ಮನೆಗೆಲಸ ಮಾಡುತ್ತಿದ್ದ ಮಹಿಳೆ, 2 ಫ್ಲ್ಯಾಟುಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಕಳ್ಳತನದ ಬಳಿಕ ಕೆಲಸಕ್ಕೆ‌ ಗೈರಾಗಿದ್ದ ಹಿನ್ನೆಲೆಯಲ್ಲಿ ಅನುಮಾನ ಹೆಚ್ಚಾಗಿತ್ತು. ಮನೆ ಮಾಲೀಕರ ದೂರಿನ ಮೇರೆಗೆ ಆರೋಪಿ ಮನೆ ಕೆಲಸದಾಕೆಯನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು, ಒಟ್ಟು 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ. ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net