

ಹರಿಹರ: ಹಗಲು ಸಮಯದಲ್ಲೇ ಮನೆ ಬೀಗ ಒಡೆದು ಕಳ್ಳತನ ಮಾಡಿರುವ ಘಟನೆ ನಗರದ ವಿದ್ಯಾನಗರ ಸಿ ಬ್ಲಾಕ್‌ನ 7 ನೇ ಕ್ರಾಸ್‌ನ ಮನೆಯೊಂದರಲ್ಲಿ ಭಾನುವಾರ ನಡೆದಿದ್ದು, ಕಳ್ಳರು 1.33 ರೂ. ಲಕ್ಷ ಮೌಲ್ಯದ ನಗ, ನಾಣ್ಯ ಕಳವು ಮಾಡಿದ್ದಾರೆ.
ಟಿ.ವಿ. ಮೆಕ್ಯಾನಿಕ್ ಎನ್.ಗಿರೀಶ್ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಅಮಾವಾಸ್ಯೆಯ ಪೂಜೆಗೆ ಕುಟುಂಬ ಸಮೇತ ಬೆಳಗ್ಗೆ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ದೇವಸ್ಥಾನಕ್ಕೆ ಹೋಗಿ ಸಂಜೆ ಮರಳಿದಾಗ ಪ್ರಕರಣ ಬಯಲಿಗೆ ಬಂದಿದೆ.
ಇಂಟರ್‌ಲಾಕ್ ಮುರಿದು ಪ್ರವೇಶಿದ ಕಳ್ಳರು ಬೀರುವಿನಲ್ಲಿದ್ದ ನಗ, ನಾಣ್ಯ ಕಳವು ಮಾಡಿದ್ದಾರೆ. ಹಗಲು ಸಮಯದಲ್ಲೇ ಕಳ್ಳತನ ನಡೆದಿರುವುದು ಬಡಾವಣೆಯಲ್ಲಿ ಭಯ ಮೂಡಿಸಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.