

ಹಾವೇರಿ: ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಹೊಸಕಿತ್ತೂರು ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗ್ರಾಮದ ರೇಣುಕಾ ಹಿರಗಾರ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರು ಇಲ್ಲದಿರುವಾಗ ಕಳ್ಳರು ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿದ್ದಾರೆ. ಮನೆಯೊಳಗೆ ಇದ್ದ ಕಟ್ಟಿಗೆಯ ದಿವಾನ ಕಾಟದಲ್ಲಿದ್ದ ಬಂಗಾರದ ಚೈನ ಸರ, ಬಂಗಾರದ ಹ್ಯಾಂಗಿಂಗ್ಸ್, ಬಂಗಾರದ ಮಾಟೀಲ್, ಡ್ರಾಪ್ಸ್, ಸೈಡ್ ಮುರಾ, ಬಂಗಾರದ ಉಂಗುರ, ಬುಗುಡಿ, ಬಂಗಾರದ ಗುಂಡುಗಳು, ಬೆಳ್ಳಿಯ ಕಾಲಚೈನ, ಪೆಂಡೆಗೆಜ್ಜೆ, ಉಡದಾರ ಹೀಗೆ ಒಟ್ಟು 1.71 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.