

ರಾಣೆಬೆನ್ನೂರ: ಮನೆ ಬೀಗ ಮುರಿದು ಒಳಗೆ ನುಗ್ಗಿದ ಖದೀಮರು ಬರೋಬ್ಬರಿ 15.68 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಇಲ್ಲಿಯ ದೊಡ್ಡಪೇಟೆಯಲ್ಲಿ ಮಂಗಳವಾರ ಹಗಲು ಹೊತ್ತಿನಲ್ಲಿಯೆ ನಡೆದಿದೆ.
ಭಾರತಿ ಶಶಿಧರ ಪಟ್ಟಣಶೆಟ್ಟಿ ಎಂಬುವರ ಮನೆ ಕಳ್ಳತನವಾಗಿರುವುದು.
ಇವರು ಮನೆಗೆ ಬೀಗ ಹಾಕಿಕೊಂಡು ಶಾಲೆಗೆ ಹೋದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳಗೆ ನುಗ್ಗಿ 15.68 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 11 ಸಾವಿರ ರೂ. ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.