ಮನೆ ಬೀಗ ಮುರಿದು 7.20 ಲಕ್ಷ ರೂ. ಚಿನ್ನಾಭರಣ ಕಳ್ಳತನ

Thief
Published on

ರಾಣೆಬೆನ್ನೂರ: ಮನೆಯ ಬೀಗ ಮುರಿದು ಬರೋಬ್ಬರಿ 7.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ ಟನೆಇಲ್ಲಿಯ ಚಿದಂಬರ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಶಾರದಾ ತತಮ್ಮಣ್ಣ ಗೋಣೆಪ್ಪನವರ (42) ಎಂಬುವರ ಮನೆ ಕಳ್ಳತನವಾಗಿರುವುದು.
ಇವರು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಖದೀಮರು ಮನೆ ಬೀಗ ಮುರಿದು ಒಳಗೆ ಹೋಗಿ 7.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ಕ್ಯಾಮರಾ ಹಾಗೂ ಮೊಬೈಲ್​ಗಳನ್ನು ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net