

ರಾಣೆಬೆನ್ನೂರ: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ ಮನೆಯ ಬೀಗ ಮುರಿದು 1.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋದ ಘಟನೆ ಇಲ್ಲಿಯ ಕುರುಬಗೇರಿಯಲ್ಲಿ ಭಾನುವಾರ ನಡೆದಿದೆ.
ಗಂಗವ್ವ ಕಿಚಡಿ ಎಂಬುವರ ಮನೆ ಕಳ್ಳತನವಾಗಿರುವುದು.
ಇವರು ತಾಲೂಕಿನ ಬಿಲ್ಲಹಳ್ಳಿಗೆ ಹೋದ ಸಮಯದಲ್ಲಿ ಯಾರೋ ಕಳ್ಳರು ಬೀಗ ಮುರಿದು ಒಳಗೆ ನುಗ್ಗಿ 1.48 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.