

ಹುಬ್ಬಳ್ಳಿ: ಕಳ್ಳರು ಇಲ್ಲಿಯ ಮೌಲಾಲಿ ಬ್ಲಾಕ್‌ನ ಮೌಲಾಲಿ ದರ್ಗಾ ಬಳಿ ಶುಕ್ರವಾರ ತಡರಾತ್ರಿ ಮನೆ ಕೀಲಿ ಮುರಿದು ಸರಣಿ ಕಳವು ಮಾಡಿದ್ದಾರೆ.
ಅಂದಾಜು 85 ಸಾವಿರ ರೂ. ಮೌಲ್ಯದ 18 ಗ್ರಾಂ ಚಿನ್ನಾಭರಣ ಮತ್ತು 5 ಸಾವಿರ ರೂ. ಕಿಮ್ಮತ್ತಿನ 90 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ 2 ಸಾವಿರ ರೂ. ನಗದು ಕಳವು ಮಾಡಿದ್ದಾರೆ. ಮೆಹಬೂಬ ಬೇಪಾರಿ, ಜರೀನಾ ಮುಲ್ಲಾ ಮತ್ತು ನುಜೀರಾ ಎಂಬುವವರ ಮನೆಯಲ್ಲಿ ಕಳವಾಗಿದ್ದು, ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.