

ವಿಜಯವಾಣಿ ಸುದ್ದಿಜಾಲ ಗದಗ
ಸಾತ್ವಿಕ ಆಹಾರ ಸೇವನೆಯಿಂದ ಆರೋಗ್ಯ ಮತ್ತು ಜೀವನ ಶೈಲಿಯಲ್ಲಿ ಸಾತ್ವಿಕತೆ ಮೂಡಲು ಸಾಧ್ಯವಿದೆ. ಸಾತ್ವಿಕ ಬದುಕಿನಿಂದ ಆರೋಗ್ಯದಲ್ಲಿ ಸದೃಢತೆಯನ್ನು ಹೊಂದಬಹುದು ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಹೂಗಾರ ಹೇಳಿದರು.
ಲಾಯನ್ಸ್ ಕ್ಲಬ್ದಿಂದ ಶುಕ್ರವಾರ ನಗರದ ಶೀಗ್ಲಿ ಸಂಕೀರ್ಣದಲ್ಲಿ ಏರ್ಪಡಿಸಿದ್ದ ಮನೆಯ ಅಂಗಳದಲ್ಲಿ ಕಿರು ತೋಟಗಾರಿಕೆ ಮತ್ತು ಸಾವಯವ ಗೊಬ್ಬರ ತಯಾರಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಹಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಸಾವಯವ ಗೊಬ್ಬರ ತಯಾರಿಕೆ, ಮನೆಯ ಅಂಗಳದಲ್ಲಿ ಕೈತೋಟ, ಟೆರೆಸ್ಸಾ ಗಾರ್ಡನಿಂಗ್, ಕಿಚನ್ ಗಾರ್ಡನಿಂಗ್ ಪದ್ಧತಿಯನ್ನು ಹವ್ಯಾಸವಾಗಿ ರೂಢಿಸಿಕೊಳ್ಳುವುದು ಉತ್ತಮ. ಆರೋಗ್ಯಕರ ಜೀವನಕ್ಕೆ ಇಂತಹ ಹವ್ಯಾಸಗಳು ಅತ್ಯಗತ್ಯ ಎಂದರು.
ಮನೆಯ ನಿರುಪಯುಕ್ತ ಪದಾರ್ಥ, ತರಕಾರಿ ಹೆಚ್ಚಿದ ಬಳಿಕ ಉಳಿಯುವ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿಸಿ ಅದನ್ನು ಗಾರ್ಡನಿಂಗ್ಗೆ ಹಾಗೂ ಕುಂಡಾಲಿಗಳಿಗೆ ಬಳಕೆ ಮಾಡಿಕೊಳ್ಳಬಹುದು. ಮನೆಯಂಗಳ ವಿಸ್ತರವಾಗಿದ್ದಲ್ಲಿ ತರಕಾರಿಯನ್ನೂ ಬೆಳೆದು ತೋಟ, ಹೊಲಗಳಿಗೂ ಈ ಗೊಬ್ಬರವನ್ನು ಬಳಕೆ ಮಾಡಬಹುದು ಎಂದರು.
ರಾಸಾಯನಿಕ ಗೊಬ್ಬರ, ಕೆಮಿಕಲ್ಯಿಂದಾಗಿ ಆಹಾರ ಧಾನ್ಯ, ತರಕಾರಿಗಳ ಮೇಲೆ ಪರಿಣಾಮ ಉಂಟಾಗಬಹುದು. ಇದರಿಂದ ಸಹಜವಾಗಿ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಸಾವಯವ ಕೃಷಿ ಪದ್ಧತಿ ಅನುಸರಿಸಿದರೆ ಭೂಮಿ ಸತ್ವ ಲವತ್ತತೆ, ಆರೋಗ್ಯದಲ್ಲಿ ಸದೃಢತೆ ಬರಲು ಸಾಧ್ಯ ಎಂದು ಮಂಜುನಾಥ ಹೂಗಾರ ಹೇಳಿದರು.
ಕ್ಲಬ್ ಅಧ್ಯೆ ಸಾವಿತ್ರಿ ಶಿಗ್ಲಿ, ಮನೆಯ ಕೈತೋಟದಲ್ಲಿ ಸಾವಯವ ಕೃಷಿ ಪದ್ದತಿಯನ್ನು ಅನುಸರಿಸಿದ್ದನ್ನು ಹಾಗೂ ಸಾವಯವ ಗೊಬ್ಬರ ತಯಾರಿಕೆ ಬಳಕೆ ಮಾಡಿದ ರೀತಿ ವಿವರಿಸಿದರು.
ರಮೇಶ ಶಿಗ್ಲಿ, ಪ್ರವಿಣ ವಾರಕರ, ರಾಜು ಮಲ್ಲಾಡದ, ಅಮೃತಾ ವಾರಕರ, ಸುರೇಖಾ ಮಲ್ಲಾಡದ, ಗಿರೀಜಾ ಶಿರೋಳ, ಭಕ್ತಿ ಕುಲಕಣಿರ್, ಮೀನಾ ಕುಷ್ಟಗಿ, ಜಯಶ್ರೀ ಮೇರವಾಡೆ, ವೀಣಾ ಸುಲಾಖೆ, ಪ್ರತಿಭಾ ಅಂಗಡಿ, ದೀಪ್ತಿ ಶಹಾ ಹಲವರು ಇದ್ದರು.