ಮನೆ ಮುಂದೆ ಕಟ್ಟಿದ್ದ 30 ಸಾವಿರ ರೂ. ಮೌಲ್ಯದ ಕುರಿ ಕಳ್ಳತನ

maxresdefault
Published on

ಹಾವೇರಿ: ಮನೆ ಮುಂದಿನ ಬಯಲು ಜಾಗದಲ್ಲಿ ಕಟ್ಟಿದ್ದ 30 ಸಾವಿರ ರೂ. ಮೌಲ್ಯದ 2 ಕುರಿಗಳನ್ನು ಯಾರೋ ಕಳ್ಳತನ ಮಾಡಿಕೊಂಡ ಹೋದ ಘಟನೆ ತಾಲೂಕಿನ ಗೌರಾಪುರದಲ್ಲಿ ಶನಿವಾರ ರಾತ್ರಿ ನಡೆದಿದೆ.

ಮಾಲತೇಶ ಫಕ್ಕೀರಪ್ಪ ಸಾಲಿ (42) ಎಂಬುವರ ಕುರಿ ಕಳ್ಳತನ ಮಾಡಿರುವುದು.

ಇವರು ಮನೆ ಮುಂಭಾಗದ ಬಯಲು ಜಾಗದಲ್ಲಿ ಕುರಿಗಳನ್ನು ಕಟ್ಟಿದ್ದರು. ರಾತ್ರಿ ಸಮಯದಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net