ಮನೆ ಮುಂದೆ ಕಟ್ಟಿದ್ದ ಮೇಕೆಗಳ ಕಳ್ಳತನ

Crime Logo
Published on

ಬ್ಯಾಡಗಿ: ಮನೆ ಮುಂದೆ ಕಟ್ಟಿದ್ದ 36 ಸಾವಿರ ರೂ. ಮೌಲ್ಯದ ಮೂರು ಮೇಕೆಗಳನ್ನು ಯಾರೋ ಖದೀಮರು ಕಳ್ಳತನ ಮಾಡಿಕೊಂಡು ಹೋದ ಘಟನೆ ಪಟ್ಟಣದ ಕಟಗರ ಓಣಿಯಲ್ಲಿ ಗುರುವಾರ ನಡೆದಿದೆ.

ಹಜರತಉಮ್ಮರ ಗನಿಸಾಬ ಮುಲ್ಲಾ (54) ಎಂಬುವರ ಮೇಕೆಗಳು ಕಳ್ಳತನವಾಗಿರುವುದು.

ಇವರು ಮನೆ ಮುಂದೆ ಮೇಕೆಗಳನ್ನು ಕಟ್ಟಿದ್ದ ಸಮಯದಲ್ಲಿ ಬುಲೇರೋ ವಾಹನದಲ್ಲಿ ಬಂದ ಖದೀಮರು 3 ಮೇಕೆಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net