ಮನೆ ಮೇಲಿಂದ ಬಿದ್ದು ವ್ಯಕ್ತಿ ಸಾವು

Crime Logo
Published on

ಹಾವೇರಿ: ಮನೆಯ ಮೇಲ್ಛಾವಣಿಗೆ ಹಾಕಿದ್ದ ಸಿಮೆಂಟ್​ ಸೀಟು ಸೋರುವುದನ್ನು ಸರಿಪಡಿಸಲು ಹೋದ ವ್ಯಕ್ತಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಶಿವಾಜಿ ನಗರ ತಾಂಡಾದಲ್ಲಿ ಸೋಮವಾರ ನಡೆದಿದೆ.

ತಿಪ್ಪಣ್ಣ ಹೇಮಲಪ್ಪ ಲಮಾಣಿ (55) ಮೃತ ವ್ಯಕ್ತಿ.

ಇವರು ಮಳೆ ಬಂದಾಗ ಮನೆಯ ಮೇಲ್ಛಾವಣಿಯ ಸಿಮೆಂಟ್​ ಸೀಟು ಸೋರುತ್ತದೆ ಎಂದು ತಾಡಪತ್ರಿ ಹಾಕುವ ಸಲುವಾಗಿ ಮನೆ ಮೇಲೆ ಹತ್ತಿದ್ದರು. ಈ ಸಮಯದಲ್ಲಿ ಸಿಮೆಂಟ್​ ಸೀಟು ಮುರಿದು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net