ಮನೆ, ನಾಲ್ಕು ಬಣವೆ ಬೆಂಕಿಗಾಹುತಿ

FIRE
Published on

ನರಗುಂದ: ಬೆಂಕಿ ತಗುಲಿ ಎರಡು ಮನೆ, ನಾಲ್ಕು ಬಣವೆ ಹಾಗೂ ಕೃಷಿ ಪರಿಕರಗಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.
ಗ್ರಾಮದ ಸಂಜೀವ ಪರಮೇಶ್ವರ ಅವರಿಗೆ ಸೇರಿದ ಮೇವಿನ ಬಣವೆ, ಟ್ರ್ಯಾಕ್ಟರ್‌ನ ಎರಡು ಗಾಲಿ, ಮಿನಿ ಟ್ರಾೃಕ್ಟರ್‌ನ ಟಯರ್, ಒಂದು ಕೂರಿಗೆ ಹಾಗೂ ವಿವಿಧ ಕೃಷಿ ಪರಿಕರಗಳು ಸುಟ್ಟಿವೆ. ನಾಗಪ್ಪ ಪೂಜಾರ, ಸಿದ್ದಪ್ಪ ಚುಳಕಿ ಅವರ ಮನೆ ಭಾಗಶಃ ಸುಟ್ಟಿದೆ. ನಾಲ್ಕೈದು ಮೇವಿನ ಬಣಿವೆ, ಸಣ್ಣಪುಟ್ಟ ವಸ್ತು ಸಾಮಗ್ರಿಗಳು ಭಸ್ಮಗೊಂಡಿವೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅವಘಡ ತಪ್ಪಿಸಿದ್ದಾರೆ.
ಮನೆ ಹಾಗೂ ಮೇವಿನ ಬಣವೆ, ಕೃಷಿ ಪರಿಕರ ಸೇರಿ ಅಂದಾಜು 10 ಲಕ್ಷ ರೂ. ಹಾನಿಯಾಗಿದೆ ಎಂದು ಪಿಡಿಒ ವಿ.ಎಸ್. ರಾಯನಗೌಡರ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net