ಮನೆ ಧರೆಗುರುಳಿ ಕಾರ್ಮಿಕ ದಂಪತಿ ಬೀದಿಪಾಲು

4-NPK-1
Published on

ನಾಪೋಕ್ಲು: ಕೋಕೇರಿ ಗ್ರಾಮದ ಅಂಬಾಡಿ ಪೈಸಾರಿಯಲ್ಲಿ ಮನೆ ಧರೆಗುರುಳಿ ಕಾರ್ಮಿಕ ಕುಟುಂಬ ನಿರ್ಗತಿಕವಾಗಿದೆ.
ಸುಮಾರು ಎಂಟು ವರ್ಷಗಳಿಂದ ವಾಸವಾಗಿದ್ದ ಕೂಲಿ ಕಾರ್ಮಿಕ ದಂಪತಿ ಲೋಕೇಶ್ - ಭವಾನಿ ಎಂಬುವರ ಮನೆ ಕುಸಿದಿದೆ. ಭಾನುವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ದಿಢೀರ್ ಕುಸಿದು ಬಿದ್ದಿದೆ. ಸಾಮಗ್ರಿಗಳು ಹಾಳಾಗಿವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಗೆ ದೂರು ಸಲ್ಲಿಸಲಾಗಿದೆ. ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್ ಅವರು ನಿರ್ಗತಿಕ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net