ಮಳೆಯಿಂದ ಮನೆಗೆ ಹಾನಿ

GKN RAIN
Published on

ಗೋಕರ್ಣ: ಮಂಗಳವಾರ ಬೆಳಗ್ಗೆ ಕಾಣಿಸಿಕೊಂಡ ಭಾರೀ ಮಳೆ ಗಾಳಿಗೆ ಹತ್ತಿರದ ಹನೇಹಳ್ಳಿಯ ಮನೆಯೊಂದರ ಅರ್ಧ ಭಾಗ ಸಂಪೂರ್ಣ ಹಾನಿಗೊಂಡಿದೆ.

ಘಟನೆಯಿಂದ ಗ್ರಾಮದ ಬಾಬು ಕೃಷ್ಣ ನಾಯ್ಕ ಅವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ.

ಕಂದಾಯ ಗ್ರಾಮಾಧಿಕಾರಿ ದರ್ಶನಾ ನಾಯಕ ಅವರು ಸ್ಥಳ ಪರಿಶೀಲನೆ ಮಾಡಿ 40 ಸಾವಿರ ರೂ. ಹಾನಿಯಾಗಿದೆಯಾಗಿ ಅಂದಾಜಿಸಿ ವರದಿ ಸಲ್ಲಿಸಿದ್ದಾರೆ. ಅವಘಡದಿಂದ ಮನೆಯಲ್ಲಿದ್ದವರು ಆಶ್ಚರ್ಯಕರವಾಗಿ ಬಚಾವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net