

ಹೊನ್ನಾವರ: ತಾಲೂಕಿನ ಮಂಕಿ ಮುಂಡಾರದ ಶ್ರೀಧರ ದ್ಯಾವ ನಾಯ್ಕ ಇವರ ವಾಸ್ತವ್ಯದ ಮನೆಯು ಜೋರಾದ ಗಾಳಿ ಮತ್ತು ಮಳೆಗೆ ಹಾನಿಯಾಗಿದೆ.
ಮನೆಯ ಒಂದು ಭಾಗದ ಗೋಡೆಯು ಮೇಲ್ಛಾವಣಿ ಸಮೇತವಾಗಿ ಸಂಪೂರ್ಣ ಬಿದ್ದಿದ್ದು,ಯಾವುದೇ ಜನ, ಜಾನುವಾರುಗೆ ಹಾನಿಯಾಗಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹಾನಿಪರಿಶೀಲಿಸಿದ್ದಾರೆ.