ಸಂಪಾಜೆಯ ವಿವಿಧೆಡೆ ಕುಸಿತದ ಭೀತಿಯಲ್ಲಿ ಮನೆಗಳು

house
Published on

ಸುಳ್ಯ: ತಾಲೂಕಿನಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ಭೂಕಂಪ ಹಾಗೂ ನಿರಂತರ ಮಳೆ ಪರಿಣಾಮ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಮನೆಗಳು ಕುಸಿದು ಬೀಳುವ ಆತಂಕ ಉಂಟಾಗಿದೆ. ಕಲ್ಲುಗುಂಡಿಯ ಕೂಲಿಶೆಡ್‌ನಲ್ಲಿರುವ ಮೂಸನ್‌ ಎನ್ನುವರ ಮನೆ ಕೆಲವು ದಿನಗಳ ಹಿಂದೆ ಸರಣಿ ಭೂಕಂಪಕ್ಕೆ ಸಿಲುಕಿ ಸ್ವಲ್ಪ ಸ್ವಲ್ಪವೇ ಕುಸಿದು ಇದೀಗ ಮನೆ ನೆಲಸಮವಾಗುವ ಭೀತಿ ಉಂಟಾಗಿದೆ. ಯಾವುದೇ ಕ್ಷಣದಲ್ಲಾದರೂ ಜರಿದು ಬೀಳುವ ಸಾಧ್ಯತೆಯಿದ್ದು, ಮನೆ ಮಂದಿ ಆತಂಕದಲ್ಲಿದ್ದಾರೆ. ಮನೆಯನ್ನು ಉಳಿಕೊಂಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇನ್ನೊಂದೆಡೆ ಗೂನಡ್ಕದಲ್ಲಿ ಸಾವಿತ್ರಿ ಎನ್ನುವವರ ಮನೆಯ ಹಿಂಭಾಗದ ಬರೆ ಕುಸಿದಿದ್ದು, ಮನೆಯ ಹಿಂಬದಿ ಜರಿದು ಬೀಳುವ ಸ್ಥಿತಿಯಲ್ಲಿದೆ. ಗೂನಡ್ಕದ ದರ್ಕಾಸ್‌ನ ಬಶೀರ್‌ ಎನ್ನುವವರ ಮನೆಯೂ ಕುಸಿಯುವ ಭೀತಿಯಲ್ಲಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿದೆ. ಮನೆಯವರು ಸದ್ಯ ಅಲ್ಲಿಂದ ತೆರವುಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net