

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿಯ ಭೋವಿ ಕಾಲನಿ ಗ್ರಾಮದ ಗೌರಮ್ಮ ಎಂಬುವವರು ಮನೆ ಶನಿವಾರ ಸುರಿದ ವಿಪರೀತ ಮಳೆ, ಗುಡುಗು-ಸಿಡಿಲು ಹಾಗೂ ಗಾಳಿಯ ಅಬ್ಬರಕ್ಕೆ ಸಂಪೂರ್ಣ ಕುಸಿದಿದೆ.
ಅವಘಡ ಸಂಭವಿಸುವ ವೇಳೆ ಮನೆಯಲ್ಲಿ ಕುಟುಂಬದ ಸದಸ್ಯರು ಇಲ್ಲದಿರುವ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ ದಿನಬಳಕೆ ವಸ್ತುಗಳು ಸಂಪೂರ್ಣ ನಾಶಗೊಂಡಿವೆ.
ಪರಿಶಿಷ್ಟ ಜನಾಂಗಕ್ಕೆ ಸೇರಿದ ಗೌರಮ್ಮ ಕಡು ಬಡವರಾಗಿದ್ದು, ಉಳಿದುಕೊಳ್ಳಲು ಮನೆಯಿಲ್ಲದೆ ತಾತ್ಕಾಲಿಕವಾಗಿ ಜಮೀನಿನ ಹೊಲದಲ್ಲೇ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಕೂಡಲೇ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಡಳಿತ ಗೌರಮ್ಮ ಅವರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.