

ಗುಳೇದಗುಡ್ಡ : ನಿರಂತರ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಪಟ್ಟಣದ ಗುಗ್ಗರಿಪೇಟೆಯ ನೂರಂದವ್ವ ಚಿಕ್ಕಾಡಿ ಅವರ ಮಣ್ಣಿನ ಮನೆಯ ಛಾವಣಿ ಶುಕ್ರವಾರ ರಾತ್ರಿ ಕುಸಿದು ಬಿದ್ದಿದೆ. ಅಡುಗೆ ಮನೆ ಮತ್ತು ಪಡಸಾಲಿಯ ಛಾವಣಿ ಸಂಪೂರ್ಣ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಅವಡ ಸಂಭವಿಸಿಲ್ಲ. ಮಳೆ ಜೊತೆಗೆ ಜತೆಗೆ ತಣ್ಣನೆ ಗಾಳಿ ಬೀಸುತ್ತಿದ್ದು, ವೃದ್ಧರು ಮಕ್ಕಳು ಮನೆಯಿಂದ ಹೊರ ಬರದಂತೆ ಮಾಡಿದೆ. ಪಟ್ಟಣದಲ್ಲಿ ವ್ಯಾಪಾರ ಚಟುವಕೆಗಳು ಸ್ಥಬ್ಧವಾಗಿತ್ತು.
ಮನೆಯಲ್ಲಿ ಒಬ್ಬಳೇ ವಾಸವಾಗಿದ್ದು, ಎರಡು ದಿನದಿಂದ ಮಳೆ ಸುರಿದಿದ್ದರಿಂದ ಅಡುಗೆ ಮನೆ, ಪಡಸಾಲೆಯ ಮೇಲ್ಛಾವಣಿ ಬಿದ್ದಿದೆ. ದಿನಬಳಕೆ ವಸ್ತುಗಳು ಹಾಳಾಗಿವೆ. ಕೂಲಿಮಾಡಿ ಬದುಕುತ್ತಿದ್ದು, ವಾಸಿಸಲು ಮನೆ ಇಲ್ಲದಂತಾಗಿದೆ. ಶಾಸಕರು, ಅಧಿಕಾರಿಗಳು ಬಿದ್ದ ಮನೆ ಕಟ್ಟಿಕೊಟ್ಟರೆ ಅನುಕೂಲವಾಗುತ್ತದೆ.
ನೂರಂದವ್ವ ಚಿಕ್ಕಾಡಿ ಗುಳೇದಗುಡ್ಡ
ಗುಳೇದಗುಡ್ಡ ಪಟ್ಟಣದ ಗುಗ್ಗರಿಪೇಟೆಯ ನೂರಂದವ್ವ ಚಿಕ್ಕಾಡಿ ಅವರ ಮನೆ ಛಾವಣಿ ಕುಸಿದು ಬಿದ್ದಿರುವುದು.