ಜೋರು ಮಳೆಗೆ ಕುಸಿದ ಮನೆ

20 kkr1(10-24 gode kusita
Published on


ಕಿಕ್ಕೇರಿ : ಹೋಬಳಿಯ ಚಿನ್ನೇನಹಳ್ಳಿ ಗ್ರಾಮದ ರೈತ ಮಹಿಳೆಯ ಮನೆ ಮಳೆ ಆರ್ಭಟಕ್ಕೆ ಸಂಪೂರ್ಣ ಕುಸಿದಿದೆ. ಶನಿವಾರ ರಾತ್ರಿ ಜೋರು ಮಳೆಯಾಗಿದೆ. ಪರಿಣಾಮ ರಾಜೇಗೌಡ ಅವರ ಪತ್ನಿ ಪಾರ್ವತಮ್ಮ ಅವರ ಮನೆ ಗೋಡೆ, ಛಾವಣಿ ಕುಸಿದು ಬಿದ್ದಿದೆ. ಗೋಡೆ ಬೀಳುತ್ತಿರುವ ಶಬ್ದವಾಗುತ್ತಿದ್ದಂತೆ ಪಾರ್ವತಮ್ಮ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಮನೆಯಲ್ಲಿದ್ದ ಧವಸ ಧಾನ್ಯ, ಪಾತ್ರೆಗಳು, ಮಂಚ, ಬಟ್ಟೆಗಳು ಹಾಳಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net