ಮನೆ ಕುಸಿತ, ಅವಶೇಷಗಳಡಿ ಸಿಲುಕಿದ ವ್ಯಕ್ತಿ

House collapsed
Published on

ಕಾರವಾರ: ಮನೆಯೊಂದರ ಮೇಲೆ ಗುಡ್ಡ ಕುಸಿದು ವ್ಯಕ್ತಿಯೊಬ್ಬ ಅದರಡಿ ಸಿಲುಕಿದ ಘಟನೆ ಮಂಗಳವಾರ ನಡೆದಿದೆ.

ಬೆಳಗ್ಗೆ 7.30 ಸಮಯಕ್ಕೆ ಕಿನ್ನರ ಗ್ರಾಮದ ನಿರಾಕಾರ ದೇವಾಲಯದ ಹತ್ತಿರ ಗುಡ್ಡ ಕುಸಿದು, ಪಕ್ಕದ ಹೆಂಚಿನ ಮನೆ ಪೂರ್ತಿಯಾಗಿ ನೆಲಸಮವಾಗಿದೆ. ಅದರಲ್ಲಿದ್ದ ತಿಕರ್ಸ್ ಗುರುವ್ ಮನೆಯಲ್ಲಿಸಿಲುಕಿಕೊಂಡಿದ್ದಾರೆ. ,ಊರಿನ ಜನರೆಲ್ಲರು ಸೇರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಿನ್ನರಕ್ಕೆ ಕಾರವಾರದಿಂದ ತಲುಪುವ ರಾಜ್ಯ ಹೆದ್ದಾರಿಯಲ್ಲಿ ಮಂದ್ರಾಳಿ ಸಮೀಪ ಗುಡ್ಡ ಕುಸಿದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net