ಮೈಸೂರಿನಲ್ಲಿ ಮನೆ ಬಾಗಿಲು ಮುರಿದು 7.77 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

theft home
Published on

ಮೈಸೂರು: ಸಾತಗಳ್ಳಿ ಬಡಾವಣೆಯ ಮನೆಯೊಂದರ ಮನೆ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು 6.77 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.

ಬಡಾವಣೆ ನಿವಾಸಿ ಇಲಿಯಾಜ್ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಇಲಿಯಾಜ್ ನ.24 ರಂದು ಕುಟುಂಬ ಸಹಿತ ಕೇರಳಕ್ಕೆ ತೆರಳಿದ್ದು, ನ.26 ರಂದು ವಾಪಾಸ್ ಬಂದ ಸಂದರ್ಭ ಮನೆಯ ಬಾಗಿಲು ಮುರಿದಿರುವುದು ಕಂಡು ಬಂತು. ಬೀರುವಿನಲ್ಲಿದ್ದ 1 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ಕಳವು ಆಗಿರುವುದು ಕಂಡು ಬಂತು. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net