

ಮೈಸೂರು: ನಗರದಲ್ಲಿ ನಿವೃತ್ತ ಯೋಧರೊಬ್ಬರ ಮನೆಯ ಹಿಂಬಾಗಿಲು ಮೀಟಿ 15 ಸಾವಿರ ರೂ. ನಗದು ದೋಚಿದ್ದು, ಮಾಹಿತಿ ಸಿಗಬಾರದು ಎಂಬ ಕಾರಣಕ್ಕೆ ಸಿಸಿ ಕ್ಯಾಮರಾದ ಡಿವಿಆರ್‌ಅನ್ನು ಕಳ್ಳರು ಕದ್ದೊಯ್ದಿದ್ದಾರೆ.
ವಸಂತನಗರ ನಿವಾಸಿ ದೀಪು ಎಂಬವರ ಮನೆಯಲ್ಲಿ ಕಳುವಾಗಿದೆ. ಮೇ 1 ರಂದು ಹಾಸನ ಜಿಲ್ಲೆಯಲ್ಲಿರುವ ಮಾವನ ಮನೆಗೆ ದೀಪು ಕುಟುಂಬ ಸಹಿತ ತೆರಳಿದ್ದರರು. ಮೇ 11 ರಂದು ಮನೆಗೆ ಹಿಂತಿರುಗಿದ ಸಂದರ್ಭ ಮನೆಯ ಹಿಂಭಾಗದ ಕಬ್ಬಿಣ ಹಾಗೂ ಮರದ ಬಾಗಿಲುಗಳು ತೆರೆದಿದ್ದವು. ರೂಂನ ಬೀರುವಿನಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಪರಿಶೀಲಿಸಿದಾಗ 15 ಸಾವಿರ ರೂ. ನಗದು ಕಳವುವಾಗಿರುವುದು ಕಂಡುಬಂತು. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.