ಮನೆ ಬೀಗ ಮುರಿದು ಕಳವು

ನಾಗೇಶ್ ಅವರ ಮನೆ ಬೀಗ ಮುರಿದು ಕಳವು ಮಾಡಿರುವುದು.
ನಾಗೇಶ್ ಅವರ ಮನೆ ಬೀಗ ಮುರಿದು ಕಳವು ಮಾಡಿರುವುದು.
Published on

ಆಲೂರು: ತಾಲೂಕಿನ ಪಾಳ್ಯ ಹೋಬಳಿ ಚಿಕ್ಕಕಣಗಾಲು ಜನತಾ ಕಾಲನಿಯ ಮನೆಯೊಂದರ ಬೀಗ ಮುರಿದು ಕಳ್ಳರು ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ.

ಗ್ರಾಮನಿವಾಸಿ ನಾಗೇಶ್ ಅವರ ಗ್ರಾಮದ ಮನೆಯಲ್ಲಿ ಸೋಮವಾರ ಯಾರೂ ಇಲ್ಲದಿರುವುದನ್ನು ಗಮನಿಸಿರುವ ಚೋರರು ಸುಮಾರು 6.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 1 ಲಕ್ಷ ನಗದನ್ನು ದೋಚಿದ್ದಾರೆ.

ಸ್ಥಳಕ್ಕೆ ಆಲೂರು ಪಟ್ಟಣ ಇನ್‌ಸ್ಪೆಕ್ಟರ್ ಗಂಗಾಧರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸದ್ಯ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net