ಸಮಾಜಸೇವಕ ಸದಾಶಿವ ಭಟ್ ಸರ್ವರಿಗೂ ಮಾದರಿ - ಚಿತ್ರಾಪುರ ಮಠಾಧೀಶ ವಿದ್ಯೇಂದ್ರ ತೀರ್ಥ ಶ್ರೀ ಆಶೀರ್ವಚನ - ಬ್ರಹ್ಮಣ್ಯಮ್ ಮೋಂತಿಮಾರು ಹಸ್ತಾಂತರ ಕಾರ್ಯಕ್ರಮ

PTR_7 JUN_7
Published on

ಫಲಾಪೇಕ್ಷೆಯಿಲ್ಲದೇ ಸೇವೆ ಸಲ್ಲಿಸಿದ ಪರಿಣಾಮ ಇಂದು ಇಡೀ ಸಮಾಜ ಸ್ಪಂದಿಸಿದೆ. ಅನಾನುಕೂಲತೆ ಉಳ್ಳವರಿಗೆ ಸ್ಪಂದಿಸುವ ಮತ್ತು ಸಹಕರಿಸುವ ಮನೋಭಾವ ಬರಬೇಕು. ವಿವಿಧ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಲೆ ಇರುವ ಸದಾಶಿವ ಭಟ್ ಮಾದರಿ ಎಂದು ಶ್ರೀ ಚಿತ್ರಾಪುರ ಮಠಾಧೀಶ ಶ್ರೀ ವಿದ್ಯೇಂದ್ರತೀರ್ಥ ಸ್ವಾಮೀಜಿ ಹೇಳಿದರು.

ಆರ್ಥಿಕವಾಗಿ ಹಿಂದುಳಿದಿದ್ದ ಕುಟುಂಬಕ್ಕೆ ನಿರ್ಮಿಸಲಾದ ಬ್ರಹ್ಮಣ್ಯಮ್ ಮೋಂತಿಮಾರು ಹಸ್ತಾಂತರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಜನ ಸೇವೆ, ಗುರುಸೇವೆ, ಗೋಸೇವೆ, ದೇವರ ಸೇವೆ ಮಾಡಿದವರಿಗೆ ಯಾವತ್ತೂ ಸೋಲಿಲ್ಲ ಎಂಬುದಕ್ಕೆ ಸದಾಶಿವ ಭಟ್ ಉದಾಹರಣೆ ಎಂದರು.

ಉದ್ಯಮಿ ರಘುನಾಥ ಸೋಮಯಾಜಿ, ಮೋಂತಿಮಾರು ಸದಾಶಿವ ಭಟ್, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಉದಯಶಂಕರ್ ನೀರ್ಪಾಜೆ ಅವರನ್ನು ಸನ್ಮಾನಿಸಲಾಯಿತು.

ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ರಾಜ್ಯ ಕಾರ್ಯದರ್ಶಿ ಮಹೇಶ್ ಕಜೆ, ಕಾರ್ಯಕಾರಿಣಿ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ, ಜಿಲ್ಲಾ ಪ್ರತಿನಿಧಿ ಶ್ರೀಧರ ಹೊಳ್ಳ, ಆರ್.ಡಿ.ಶಾಸ್ತ್ರಿ, ಉದಯ ಕುಮಾರ್, ಪ್ರಮುಖರಾದ ಉದಯಶಂಕರ್ ಭಟ್ ಮಿತ್ತೂರು, ರಮೇಶ್ ಭಟ್ ಸರವು, ಭಾಸ್ಕರ ಹೊಸಮನೆ, ಕೃಷ್ಣಪ್ರಮೋದ ಶರ್ಮ ಮುಡಿಪು, ಉದಯ ಕುಮಾರ್ ಭಟ್ ಖಂಡಿಗ, ರಘುನಂದನ್ ಕೆ.ಎನ್, ಜಿ.ಆರ್.ಜಗದೀಶ್, ಸುಬ್ರಾಯ ನಂದೋಡಿ, ಪ್ರಕಾಶ್ ಇಳಂತಿಲ, ಪ್ರಕಾಶ್ ಪಿ.ಎಸ್., ರಾಕೋಡಿ ಈಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಕಡೆಯಿಂದ ನೆರವು

ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ವತಿಯಿಂದ ಜಿಲ್ಲೆಯಲ್ಲಿ ಓರ್ವ ಅರ್ಹ ವ್ಯಕ್ತಿಗೆ ಮನೆ ನಿರ್ಮಿಸಿಕೊಡುವುದೆಂದು ಘೋಷಿಸಲಾಗಿತ್ತು. ಮಂಗಳೂರು ಹವ್ಯಕ ಮಂಡಲದ ೧೨ ವಲಯಗಳಿಂದ ೫ ಲಕ್ಷ ರೂ. ನೆರವು ದೊರೆಯಿತು. ಗಾಯತ್ರಿ ಯಜ್ಞ ಕಾರ್ಯಕ್ರಮದಲ್ಲಿ ಉಳಿದ ೨.೫೦ ಲಕ್ಷ ರೂ., ಉದ್ಯಮಿ ರಘುನಾಥ ಸೋಮಯಾಜಿ ಅವರಿಂದ ೨.೫೦ ಲಕ್ಷ ರೂ., ಆರೆಸ್ಸೆಸ್ ಮತ್ತಿತರ ಸಂಘಟನೆಗಳ ನೆರವಿನಿಂದ ೧೨ ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net