ಹಾಗಾಗಿ, ಪಟ್ಟಿಯಲ್ಲಿರುವ ಎಲ್ಲರೂ ಫೆ. 19ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಕಚೇರಿಗೆ ತಪ್ಪದೇ ಹಾಜರಾಗಿ ಮನೆ ಸಂಖ್ಯೆಯನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಹಕ್ಕುಪತ್ರ ಪಡೆದುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ವಿನಾಯಕ ನಾರ್ವಡೆ ತಿಳಿಸಿದ್ದಾರೆ. ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಈಗಾಗಲೇ ಮಡಿಕೇರಿ ತಾಲೂಕು ಬಿಳಿಗೇರಿಯಲ್ಲಿ 44, ಕರ್ಣಂಗೇರಿಯಲ್ಲಿ 70, ಮದೆಯಲ್ಲಿ 160, ಕೆ.ನಿಡುಗಣೆಯಲ್ಲಿ 152 ಸೋಮವಾರಪೇಟೆ ತಾಲೂಕು ಜಂಬೂರಿನಲ್ಲಿ 379 ಮನೆಗಳು ಹಂಚಿಕೆಯಾಗಿವೆ. ಇದಲ್ಲದೆ ಸಂತ್ರಸ್ತರು ಸ್ವಂತ ಜಾಗದಲ್ಲೇ ಮನೆ ನಿರ್ಮಿಸಿಕೊಳ್ಳಲು ಇಚ್ಛಿಸಿದ್ದ 83 ಮಂದಿಯ ಪೈಕಿ 80 ಮಂದಿ ಮನೆ ನಿರ್ಮಿಸಿಕೊಂಡಿದ್ದಾರೆ.