

ಹುಬ್ಬಳ್ಳಿ: ನಗರದ ಹಳೇ ಹುಬ್ಬಳ್ಳಿ ಹಾಗೂ ಉಪನಗರ ಠಾಣೆ ವ್ಯಾಪ್ತಿಯ ಮೂರು ಹೋಟೆಲ್‌ಗಳನ್ನು ಪೊಲೀಸರು ರಾತ್ರಿ 11ಕ್ಕೆ ವ್ಯವಹಾರ ಬಂದ್ ಮಾಡಿಸುತ್ತಿದ್ದರು. ಇದರ ವಿರುದ್ಧ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮಾನ್ಯ ಮಾಡಿದ ಧಾರವಾಡ ಹೈಕೋರ್ಟ್ ಪೀಠವು ಹೋಟೆಲ್ ಮಾಲೀಕರ ಕೋರಿಕೆ ಪುರಸ್ಕರಿಸಿ, ಹೋಟೆಲ್‌ಗಳು ರಾತ್ರಿ 1ರವರೆಗೆ ತೊಂದರೆ ಕೊಡದಿರಲು ಆದೇಶಿಸಿದೆ.
ಬಾರ್‌ಗಳು ರಾತ್ರಿ 1ರವರೆಗೆ ಬಾಗಿಲು ತೆಗೆದಿರುತ್ತವೆ. ಹೋಟೆಲ್ 11ರೊಳಗೆ ಮುಚ್ಚುವಂತೆ ಪೊಲೀಸರು ತಾಕೀತು ಮಾಡುತ್ತಿದ್ದಾರೆ. ಪುನಃ ತೊಂದರೆ ಕಿರುಕುಳ ತೊಂದರೆ ಕೊಡುತ್ತಿದ್ದಾರೆ. ಹಾಗಾಗಿ ಹೋಟೆಲ್‌ಗಳಿಗೆ ಸಮಯ ಮಿತಿ ಹೇರದೇ ಅನುಮತಿಸಬೇಕೆಂದು ಹೋಟೆಲ್ ಮಾಲೀಕರ ಪರ ವಾದ ಮಂಡಿಸಿದ ವಕೀಲ ವಿ.ಎಂ. ಶೀಲವಂತ ಅವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹು-ಧಾ ಪೊಲೀಸ್ ಆಯುಕ್ತರು, ಹಳೇ ಹುಬ್ಬಳ್ಳಿ ಹಾಗೂ ಉಪನಗರ ಠಾಣೆ ಪೊಲೀಸರಿಗೆ ಆದೇಶಿಸಬೇಕೆಂದು ನ್ಯಾಯಮೂರ್ತಿಗಳನ್ನು ಕೋರಿದ್ದರು.
ಅಲ್ಲದೆ ಶಾಂತಿಸಾಗರ ಜ್ಯೂಸ್ ಸೆಂಟರ್ ರಾತ್ರಿ 10ಕ್ಕೆ ಬಂದ್ ಮಾಡಿಸಿದ್ದರ ವಿರುದ್ಧ 2013ರಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ, 2024ರಲ್ಲಿ ಪೌರಾಡಳಿತ ನಿರ್ದೇಶನಾಲಯದ ಆದೇಶ ಹೊರಡಿಸಿದ್ದನ್ನು ವಕೀಲರು ನ್ಯಾಯ ಮೂರ್ತಿಗಳ ಗಮನಕ್ಕೆ ತಂದರು. ವಾದ ವಿವಾದ ಆಲಿಸಿದ ನ್ಯಾ. ಪ್ರದೀಪಸಿಂಗ್ ಏರೂರ ಅವರಿದ್ದ ಏಕಸದಸ್ಯ ಪೀಠವು ಹೋಟೆಲ್‌ಗಳಿಗೆ ಸಮಯ ನಿರ್ಬಂಧ ಸಲ್ಲದೆಂದು ನ. 20ರಂದು ಆದೇಶ ಹೊರಡಿಸಿದೆ. ಶ್ರೀ ಪಂಜುರ್ಲಿ, ಹೋಟೆಲ್ ವಿನಾಯಕ ವೆಜ್ ಆ್ಯಂಡ್ ನಾನ್‌ವೆಜ್ ಮತ್ತು ಶ್ರೀ ಜೈನೀಸ್ ಫಾಸ್ಟ್ ಫುಡ್ ಸೆಂಟರ್‌ನವರು ರಿಟ್ ಅರ್ಜಿ ಸಲ್ಲಿಸಿದ್ದರು.