

ಗದಗ : ನಗರದ ವಿಶ್ವ ಹೊಟೇಲ್‌ನಲ್ಲಿ ಇಂದು ಏರ್ಪಡಿಸಿದ ಗದಗ ಜಿಲ್ಲಾ ಹೊಟೇಲ ಒಡೆಯರ ಸಂಘದಿದ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ನೂತನ ಅಧ್ಯಕ್ಷರಾದ ಶ್ರೀ ಜಿ. ಕೆ. ಶೆಟ್ಟಿ ಅವರಿಗೆ ಗದಗ ಜಿಲ್ಲಾ ಹೊಟೇಲ ಒಡೆಯರ ಸಂಘದ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ರಾಜ್ಯ ಸಂಘದ ಅಧ್ಯಕ್ಷರಾದ ಸಿ. ಕೆ. ಶೆಟ್ಟಿಯವರು ಮಾತನಾಡಿದ ರಾಜ್ಯದ ಎಲ್ಲಾ ಜಿಲ್ಲೆಯ ಹೊಟೇಲ್ ಸಂಘದ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳನ್ನು ಸದಸ್ಯರ ರಾಜ್ಯ ಸಮಾವೇಶವನ್ನು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ದಿನಾಂಕ ೩೧-೦೮-೨೦೨೪ ರಂದು ಅದ್ದೂರಿಯಾಗಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಹೊಟೇಲ್ ಒಡೆಯರ ಸಂಘದವರನ್ನು ಆಮಂತ್ರಿಸಿ ತಾವೆಲ್ಲರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮ ಅದ್ದೂರಿ ನಡೆಯಲು ತಾವೆಲ್ಲ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
ನಾನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ಮಾಡಿ ಹೊಟೇಲ್ ಉದ್ದಿಮೆದಾರರನ್ನು ರಾಜ್ಯ ಹೊಟೇಲ್ ಸಂಘದ ಸದಸ್ಯರನ್ನಾಗಿ ಮಾಡಿ ಸಂಘದ ಬಲವರ್ದನೆಗೆ ಶ್ರಮಿಸುವುದಾಗಿ ಹೇಳಿದರು. ನನ್ನನ್ನು ಹಾಗೂ ಸಂಘದ ಪದಾಧಿಕಾರಿಗಳ ಆಯ್ಕೆಗೆ ಮಾಡಿದ್ದಕ್ಕೆ ತಮ್ಮೆಲ್ಲರ ಸಹಕಾರಕ್ಕೆ ಅಭಿನಂದಿಸಿ ತಮ್ಮ ಸಹಕಾರ ಇದೇ ರೀತಿ ಮುಂದೆಯು ನೀಡಬೇಕೆಂದು ವಿನಂತಿಸಿಕೊAಡರು.
ಈ ಸಂದರ್ಭದಲ್ಲಿ ರಾಜ್ಯದ ನೂತನ ಪದಾಧಿಕಾರಿಗಳಾದ ಮಧುಕರ ಶೆಟ್ಟಿ, ಗುರುರಾಜ ಉಪಾಧ್ಯಯ, ಶೇಖರ್ ನಾಯ್ಡು, ಶ್ರೀನಿವಾಸ್ ಶೆಟ್ಟಿ, ವಿಜಯ ಹೆಗ್ಡೆ ಅವರಿಗೆ ಗದಗ ಹೋಟೆಲ್ ಒಡೆಯರ ಸಂಘದಿAದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗದಗಿನ ಹೋಟೆಲ್ ಉದ್ಯಮಿ ಸುಧಾಕರ ಶೆಟ್ಟಿ, ಅಶೋಕ್ ಶೆಟ್ಟಿ, ಶಂಕರ ನಾಯ್ಕ, ಜಯಶೀಲ ಶೆಟ್ಟಿ, ಕರುಣಾಕರ ಶೆಟ್ಟಿ, ಪಿ. ವಿ. ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು. ಕಾವೆಂಶ್ರೀ ಕಾರ್ಯಕ್ರಮ ನಿರೂಪಣೆ ಮಾಡಿದರು. ಪಲ್ಲವಿ ಹೋಟೆಲ್ ಮಾಲೀಕರಾದ ಸುಧಾಕರ ಶೆಟ್ಟಿ ಸ್ವಾಗತಿಸಿದರು.