ಬಿಸಿಯೂಟ ಕೋಣೆ-ಶೌಚಗೃಹ ಶಿಥಿಲ

30-LNG-01
ಲಿಂಗಸುಗೂರಿನಲ್ಲಿ ಬಿಇಒ ಹುಂಬಣ್ಣ ರಾಠೋಡಗೆ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು.ಸೇನೆ ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ, ಐದನಾಳ ಗ್ರಾಮ ಘಟಕದ ಅಧ್ಯಕ್ಷ ವೀರೇಶಸ್ವಾಮಿ ಮಹಾಂತಮಠ, ತಿಮ್ಮನಗೌಡ ಇತರರಿದ್ದರು.
Published on

ಲಿಂಗಸುಗೂರು: ಐದನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಕೋಣೆ ಹಾಗೂ ಶೌಚಗೃಹ ಶಿಥಿಲಗೊಂಡಿದ್ದು, ಹೊಸ ಕಟ್ಟಡ ನಿರ್ಮಿಸುವಂತೆ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸೋಮವಾರ ಬಿಇಒ ಹುಂಬಣ್ಣ ರಾಠೋಡಗೆ ಮನವಿ ಸಲ್ಲಿಸಿದರು.

ಬಿಸಿಯೂಟ ಕೋಣೆ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಯಾವ ಸಮಯದಲ್ಲಿ ಕಟ್ಟಡ ಕುಸಿದು ಬೀಳುತ್ತದೆ ಎಂಬ ಆತಂಕ ಅಡುಗೆದಾರರಲ್ಲಿ ಮನೆ ಮಾಡಿದೆ. ಛಾವಣಿಯ ಸಿಮೆಂಟ್ ಕಿತ್ತು ಬೀಳುವ ಸ್ಥಿತಿಯಲ್ಲಿದೆ. ಶೌಚಗೃಹ ಪರಿಸ್ಥಿತಿಯಂತೂ ಹೇಳತೀರದಾಗಿದೆ.

ಇದರಿಂದಾಗಿ ಮಕ್ಕಳು ಬಯಲಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸದಾಗಿ ಕಟ್ಟಡ ನಿರ್ಮಿಸಿ ಅಡುಗೆ ಸಿಬ್ಬಂದಿ, ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು. ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸೇನೆ ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ, ಐದನಾಳ ಗ್ರಾಮ ಘಟಕದ ಅಧ್ಯಕ್ಷ ವೀರೇಶಸ್ವಾಮಿ ಮಹಾಂತಮಠ, ತಿಮ್ಮನಗೌಡ, ಬಸವರಾಜ ಯಲಗಲದಿನ್ನಿ, ಅಜೀಜ್ ಪಾಷಾ, ವೆಂಕಟೇಶ, ಹನುಮಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net