ಹೊಸೂರು&ಬೆಂಗಳೂರು ರಸ್ತೆ ಸಂಚಾರ ದುಸ್ತರ

20_05_2025_BGR_RURAL_FLAP_6A
Published on

ಆನೇಕಲ್​ : ಸೋಮವಾರ ಸಂಜೆ ಸುರಿದ ಮಳೆಗೆ ಹೊಸೂರು& ಬೆಂಗಳೂರು ಮುಖ್ಯರಸ್ತೆಯ ನೆರಳೂರು ಬಳಿ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿತ್ತು.

ಮಧ್ಯಾಹ್ನ ಪ್ರಾರಂಭವಾದ ಮಳೆ ರಾತ್ರಿವರೆಗೂ ನಿರಂತರವಾಗಿ ಸುರಿದ ಹಿನ್ನೆಲೆ ಹೆದ್ದಾರಿಯಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡಿದರು. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುವುದಿಲ್ಲ. ಮಳೆ ಬಂದಾಗಲೆಲ್ಲ ಇದೇ ಪರಿಸ್ಥಿತಿ ನಿರ್ಮಾಣ ವಾಗುತ್ತದೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹೆದ್ದಾರಿ ಪೂರ್ತಿ ನೀರು ನಿಲ್ಲುವುದರಿಂದ ಹೆದ್ದಾರಿಯಲ್ಲಿ ಎಷ್ಟು ಆಳ ನೀರಿದೆ?, ಗುಂಡಿ ಎಲ್ಲಿದೆ? ಎಂಬುದು ಗೊತ್ತಾಗದೆ, ರಾತ್ರಿ ವೇಳೆ ನೀರಿನಲ್ಲಿ ವಾಹನಗಳ ಇಂಜಿನ್​ ಬಂದ್​ ಆಗುವುದು ಸಾಮಾನ್ಯ. ಕೆಟ್ಟುನಿಂತ ವಾಹನ ಸವಾರರು ಮಕ್ಕಳು ಹಾಗೂ ಹಿರಿಯರ ಜತೆಗೆ ನಡುರಸ್ತೆಯಲ್ಲೇ ನಿಲ್ಲುವಂತಾಗಿತ್ತು. ಅಲ್ಲದೆ ಹೆದ್ದಾರಿಯ ನೀರು ಚರಂಡಿ ಮೂಲಕ ಹಾದು ಹೋಗುತ್ತಿಲ್ಲ. ಸುತ್ತಮುತ್ತಲ ರಾಜ ಕಾಲುವೆಗಳಿಗೆ ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿಕೊಡದ ಹಿನ್ನೆಲೆ ಮಳೆ ಬಂದಾಗ ಈ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net