

ಸಿರಗುಪ್ಪ: ಹೊಸ್ತಿಲ ಹುಣ್ಣಿಮೆ ನಿಮಿತ್ತ ನಗರದ ಪ್ಯಾಟೆ ಆಂಜನೇಯಸ್ವಾಮಿ ರಥೋತ್ಸವ ಭಾನುವಾರ ನಡೆಯಿತು. ಬೆಳಗಿನ ಜಾವ ಶ್ರೀ ಆಂಜನೇಯಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಸಕಲ ಮಂಗಳವಾದ್ಯಗಳೊಂದಿಗೆ ತುಂಗಭದ್ರಾ ನದಿ ತೀರಕ್ಕೆ ತೆರಳಿ ಗಂಗೆ ಪೂಜೆ ನೆರವೇರಿಸಲಾಯಿತು. ಮಹಿಳೆಯರ ಕಳಸ ಮತ್ತು ಸಕಲ ಮಂಗಳವಾದ್ಯಗಳೊಂದಿಗೆ ಸ್ವಾಮಿ ರಥೋತ್ಸವ ನಡೆಯಿತು. ಭಕ್ತರು ಹೂವು, ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.