ಟೆಂಡರ್‌ ವಿನಾಯಿತಿ ನೀಡಿ

hostel workers protest tender process
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಸ್ಟೆಲ್ ಹೊರ ಗುತ್ತಿಗೆ ನೌಕರರು ಶುಕ್ರವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಸಂಘದ ಜಂಬಯ್ಯ ನಾಯಕ್, ಗ್ಯಾನೇಶ ಕಡಗದ, ಮಹಮದ್ ರಫೀಕ್, ದಾವಲಸಾಬ್ ಕಂಪ್ಲಿ, ಫಕೀರಪ್ಪ, ಬಸವರಾಜ ಕೆಳಗಿನಮನಿ, ಮುತ್ತವ್ವ ಇತರರಿದ್ದರು.
Published on

ಕೊಪ್ಪಳ : ಸಹಕಾರ ಸಂಘ ಮೂಲಕ ಹೊರ ಗುತ್ತಿಗೆ ಸೇವೆ ಪಡೆಯುತ್ತಿದ್ದು, ೧೧ ವರ್ಷದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ ಟೆಂಡರ್ ಕರೆವ ಬದಲು ಜಿಲ್ಲಾ ಸಾರ್ವಜನಿಕ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಹಕಾರ ಸಂಘಕ್ಕೆ ಟೆಂಡರ್ ವಿನಾಯಿತಿ ನೀಡುವಂತೆ ಆಗ್ರಹಿಸಿ ನೌಕರರು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಮೊದಲು ವೇತನ, ಪಿಎಫ್, ಇಎಸ್‌ಐನಲ್ಲಿ ಸಮಸ್ಯೆಗಳಿದ್ದವು. ಸಹಾಕರ ಸಂಘ ಅಸ್ತಿತ್ವಕ್ಕೆ ಬಂದ ನಂತರ ಯಾವುದೇ ಸಮಸ್ಯೆಗಳಾಗಿಲ್ಲ. ಆದರೆ, ಪ್ರತಿ ವರ್ಷ ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರಿಂದ ತೊಂದರೆ ಆಗುತ್ತಿದೆ. ಏಜೆನ್ಸಿಗೆ ಭದ್ರತೆ ಇಲ್ಲವಾಗಿದೆ. ೧,೧೦೦ ನೌಕರರರು ಆತಂಕಪಡುವಂತಾಗಿದೆ ಎಂದರು.

ಸಹಕಾರ ಸಂಘಕ್ಕೆ ಟೆಂಡರ್ ವಿನಾಯಿತಿ ನೀಡಬೇಕು. ಸಾಮಗ್ರಿ ಸರಬರಾಜು ಮಾಡುವ ಏಜೆನ್ಸಿಗಳಿಗೆ ವಿನಾಯಿತಿ ನೀಡಲಾಗಿದೆ. ಅದರಂತೆ ನಮ್ಮ ಸಂಘಕ್ಕೂ ವಿನಾಯಿತಿ ನೀಡಬೇಕು. ಇದರಿಂದ ನಮ್ಮೆಲ್ಲರಿಗೆ ಅನುಕೂಲವಾಗಲಿದೆ. ಬಂಡವಾಳಶಾಹಿ ಖಾಸಗಿ ಏಜೆನ್ಸಿಗಳಿಗೆ ನೀಡಬಾರದು. ಪದೇ ಪದೆ ಟೆಂಡರ್ ಕರೆಯುವುದನ್ನು ನಿಲಿಸಿದಲ್ಲಿ ಸರ್ಕಾರ ಹಾಗೂ ಏಜೆನ್ಸಿಗೆ ಆಗುವ ನಷ್ಟ ತಪ್ಪಿಸಬಹುದು. ಗುತ್ತಿಗೆ ಪದ್ಧತಿ ಕೈ ಬಿಟ್ಟು ಸಹಕಾರ ಸಂಘಕ್ಕೆ ಬೆಂಬಲ ನೀಡಿ ಎಂದು ಒತ್ತಾಯಿಸಿದರು.

ಸಂಘದ ಜಂಬಯ್ಯ ನಾಯಕ್, ಗ್ಯಾನೇಶ ಕಡಗದ, ಮಹಮದ್ ರಫೀಕ್, ದಾವಲಸಾಬ್ ಕಂಪ್ಲಿ, ಫಕೀರಪ್ಪ, ಬಸವರಾಜ ಕೆಳಗಿನಮನಿ, ಮುತ್ತವ್ವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net