ತುಮಕೂರು ಹಾಸ್ಟೆಲ್​ ವಾರ್ಡನ್​ನ ಹೈ ಡ್ರಾಮ: ಶಿಕ್ಷಕರು,ಮಕ್ಕಳ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ!

Hostelwarden1
Published on

ತುಮಕೂರು: ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್​ ವಾರ್ಡನ್​​ನಿಂದ ಮಂಗಳವಾರ ಬೆಳಗ್ಗೆ ಹೈ ಡ್ರಾಮವೇ ನಡೆಯಿತು.

ಕೊರಟಗೆರೆ ತಾಲೂಕಿನ ಹೂಲಿಕುಂಟೆಯ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಆರೋಪಕ್ಕೆ ಪ್ರತಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುವ ಮೂಲಕ ಹಾಸ್ಟೆಲ್​ ವಾರ್ಡನ್​ ವರ್ತನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ವಸತಿ ಶಾಲೆ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡ್ತಿಲ್ಲ ಎಂದು ಇಲ್ಲಿನ ಮಕ್ಕಳು ಆರೋಪ ಮಾಡಿದ್ದಾರೆ. ಈ ಬೆನ್ನಲ್ಲೇ ಶಿಕ್ಷಕರು,ಮಕ್ಕಳ ಮುಂದೆಯೇ ವಾರ್ಡನ್ ತಾರಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವಾರ್ಡನ್ ವಿರುದ್ದ ಕಳೆದ ವಾರ ಇಡೀ ರಾತ್ರಿ ಪ್ರತಿಭಟನೆ ನಡೆಸಲಾಗಿತ್ತು, ನಿಯಮದಂತೆ ಯಾವ ಆಹಾರವೂ ನೀಡ್ತಿಲ್ಲ ಎಂದು ಈಕೆಯ ವಿರುದ್ಧ ಪ್ರತಿಭಟನೆ ನಡೆಸಿ ಹಿರಿಯ ಅಧಿಕಾರಿಗಳ ಗಮನ ಸೆಳೆದು ದೂರು ವಿದ್ಯಾರ್ಥಿನಿಯರು ದೂರು ನೀಡಿದ್ದರು.

ಇದಕ್ಕೆ ಹೆದರಿದ ಈಕೆ ಮಂಗಳವಾರ ಬೆಳಗ್ಗೆ ಯೋಗಾಭ್ಯಾಸ ವೇಳೆ ರಂಗಮಂದಿರದಲ್ಲಿ ಹಗ್ಗ ಹಿಡಿದುಕೊಂಡು ಆತ್ಮಹತ್ಯೆ ಬೆದರಿಕೆಯೊಡ್ಡಿದ್ದು, ಬಳಿಕ ಕೊಠಡಿ ಬಾಗಿಲು ಹಾಕಿಕೊಂಡು ನೇಣು ಬಿಗಿದು ಹೈ ಡ್ರಾಮವೇ ಸೃಷ್ಟಿಯಾಗಿತ್ತು.

ಬಾಗಿಲು‌ ಮುರಿದು ತಾರಾಳನ್ನು ಶಿಕ್ಷಕರು ಆಚೆಗೆ ಕರೆತಂದಿದ್ದು, ಸದ್ಯ ಸ್ಥಳಕ್ಕೆ ಜಂಟಿ ಕಾರ್ಯದರ್ಶಿ ಪ್ರೇಮಾ ಭೇಟಿ ನೀಡಿ ವಿಚಾರಿಸಿದ್ದಾರೆ. ಈ ವೇಳೆ ವಾರ್ಡನ್ ತಾರಾಳನ್ನ ಕೂಡಲೇ ಬೇರೆಡೆ ವರ್ಗಾಯಿಸಬೇಕೆಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net